ನಿಮ್ಮ ಅಭಿಪ್ರಾಯ ಸಲಹೆ ಸೂಚನೆಗಳಿಗಾಗಿ ತನ್ಮಯ ಕಾಯುತ್ತಿರುತ್ತಾಳೆ

Thursday 1 February 2018

ವೃತ್ತಿ - ಪ್ರವೃತ್ತಿ

ಪ್ರವೃತ್ತಿಯನ್ನೇ ವೃತ್ತಿಯಾಗಿ ಮಾಡಿಕೊಂಡವರ ಬಗ್ಗೆ ನಂಗೊಂಥರಾ ಹೊಟ್ಟೆ ಕಿಚ್ಚಿತ್ತು. ನಮಗಿಲ್ಲದ ಯಾವುದೋ ಸೌಲಭ್ಯವೋ ಸವಲತ್ತೋ ಮತ್ತೊಬ್ಬರಿಗೆ ಇದೆ ಅಂದಾಗ ಸಾಮಾನ್ಯ ಭಾರತೀಯರೆಲ್ಲರ ಹೊಟ್ಟೆಯಲ್ಲಿ ಏಳತ್ತಲ್ಲ, ಅದೇ ಸೇಮ್ ಕಿಚ್ಚು.


ಇತ್ತೀಚೆಗೆ ಇದೆಲ್ಲ ಕಡಿಮೆ ಆಗಿದೆ, ಅವರ ಕಷ್ಟ ಅರ್ಥ ಆಗ್ತಿದೆ ಅಂತಲ್ಲ, ಒಂದಿಷ್ಟು ಕಷ್ಟ ನಾನೇ ಇಮ್ಯಾಜಿನ್ ಮಾಡಿಕೊಂಡಿದ್ದೇನೆ.
ಅದರಲ್ಲೊಂದು ಪ್ರವೃತ್ತಿಯಲ್ಲಿ ಆಸಕ್ತಿ ಕಡಿಮೆ ಆಗೋದು, ಆಗಲ್ವ, ಹೇಳಿ, ವೃತ್ತಿ ಅಂತ ಸ್ವೀಕರಿಸಿದ ಮೇಲೆ ಅದು ಕಂಪಲ್ಸರಿ, ಇವತ್ತು ಮಾಡಲ್ಲ ನಾಳೆ ಮೂಡಿಲ್ಲ ಅನ್ನುವ ಅವಕಾಶ ಇಲ್ಲ. ಯಾರಿಗೋ deadline ಕೊಟ್ಟಮೇಲೆ ಕಥೆ ಹೇಳುವುದಕ್ಕೆ ಅವಕಾಶ ಇಲ್ಲ
ಯಾರ್ಯಾರು ಪ್ರವೃತ್ತಿಯನ್ನ ವೃತ್ತಿ ಮಾಡಿಕೊಂಡೂ ಅದರಲ್ಲಿ ಆಸಕ್ತಿ ಉಳಿಸಿಕೊಳ್ಳಬಲ್ಲರೋ, ಅವರು ನಿಜವಾಗಿ ಆಸಕ್ತರು.